Color Mode Toggle
Insurance awareness quiz (BimaGyaan)

ಪ್ರಾಯೋಜಕರು
Image 1 Image 2 Image 3 Image 4
ಜನಪ್ರಿಯ ಹುಡುಕಾಟಗಳು: ಎನ್.ಎಸ್.ಎಫ್.ಇ, ಟೆಂಡರ್ ಗಳು , ಫೆಪಿಎ

ಪ್ರಾಯೋಜಕರು

ಪೋಷಾ ಬೇಗಂ

[breadcrumbs]

- ಪೋಷಾ ಬೇಗಂ

ಜಮ್ಮು ಮತ್ತು ಕಾಶ್ಮೀರ

ಮಹಿಳೆಯನ್ನು ಸಬಲೀಕರಣಗೊಳಿಸಿದರೆ, ಕುಟುಂಬವೊಂದು ಸಬಲೀಕರಣಗೊಳ್ಳುತ್ತದೆ

ನಾನು ಇತ್ತೀಚೆಗೆ ಎನ್.ಸಿ.ಎಫ್.ಇ ಆಯೋಜಿಸಿದ್ದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ, ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಿತು.

ಬಜೆಟ್, ಉಳಿತಾಯ ಮತ್ತು ಯೋಜಿತ ಹೂಡಿಕೆಯ ಮಹತ್ವವನ್ನು ನಾನು ಕಲಿತುಕೊಂಡೆ. ನಾನು ಈ ಮೊದಲು ದಿನಕ್ಕೆ 5-6 ಲೀಟರ್ ಹಾಲು ನೀಡುತ್ತಿದ್ದ ಹಸುವನ್ನು ಹೊಂದಿದ್ದೆ. ಈಗ ನಾನು ತಲಾ 15-20 ಲೀಟರ್ ಹಾಲು ನೀಡುವ ಇನ್ನೂ 2 ಹಸುಗಳನ್ನು ಖರೀದಿಸಿದ್ದೇನೆ. ಇದು ನನಗೆ ಉತ್ತಮ ಪ್ರಮಾಣದ ದೈನಂದಿನ ಆದಾಯವನ್ನು ನೀಡುತ್ತದೆ ಮತ್ತು ಅದರ ಉತ್ತಮ ಭಾಗವನ್ನು ಉಳಿಸಲು ನನಗೆ ಸಾಧ್ಯವಾಗುತ್ತದೆ. ಸರಿಯಾದ ಹಣಕಾಸು ಯೋಜನೆಯಿಂದಾಗಿ ಇದು ಸಾಧ್ಯವಾಯಿತು. ವ್ಯವಸ್ಥಿತ ಉಳಿತಾಯದ ಮೂಲಕ, ಸಾಂಕ್ರಾಮಿಕ ರೋಗದ ಸಮಯದಲ್ಲಿ ನನ್ನ ಗ್ರಾಮಸ್ಥರಿಗೆ ವೈದ್ಯಕೀಯ ವೆಚ್ಚಗಳಲ್ಲಿ ಸಹಾಯ ಮಾಡಲು ನನಗೆ ಸಾಧ್ಯವಾಯಿತು.

ನಾನು ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್‌ಗೆ ಸಬ್‌ಸ್ಕ್ರೈಬ್ ಮಾಡಿದ್ದೇನೆ, ಇದು ರೂ. 5 ಲಕ್ಷದ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ​ಜಿ​ಒಐ​ ಯ ಪ್ರಮುಖ ವಿಮಾ ಯೋಜನೆಗಳಾದ ಪಿಎಂಎಸ್ಬಿವೈ ಮತ್ತು ಪಿಎಂಜೆಜೆಬಿವೈ ಬಗ್ಗೆ ನಾನು ಕಲಿತುಕೊಂಡೆ ಮತ್ತು ಈ ಯೋಜನೆಗಳಿಗೆ ಸಬ್‌ಸ್ಕ್ರೈಬ್ ಮಾಡುವ ಮೂಲಕ ನಾನು ನನ್ನ ಕುಟುಂಬವನ್ನು ರಕ್ಷಿಸಿದ್ದೇನೆ. ಇದು ಮಿತವ್ಯಯಕಾರಿ ಮತ್ತು ತೊಂದರೆ ಮುಕ್ತವಾಗಿದೆ. ನಾನು ನನ್ನ ಹಸುಗಳಿಗೆ ವಿಮೆ ಮಾಡಿದ್ದೇನೆ, ಇದಕ್ಕಾಗಿ ಪಶುವೈದ್ಯಕೀಯ ಇಲಾಖೆ ನನಗೆ ಸಾಕಷ್ಟು ಸಹಾಯ ಮಾಡಿದೆ.

ದೀರ್ಘಕಾಲೀನ ಯೋಜನೆಯ ಕುರಿತ ಕಾರ್ಯಾಗಾರದಲ್ಲಿ ಪಡೆದ ಜ್ಞಾನವು ಜೀವನ ಮತ್ತು ಹಣದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಾಯಿಸಿತು ಹಾಗೂ ನನಗೆ ಮತ್ತು ನನ್ನ ಪತಿಗೆ ಅಟಲ್ ಪಿಂಚಣಿ ಯೋಜನೆ (​ಎಪಿವೈ​) ಖಾತೆಯನ್ನು ತೆರೆಯಲು ನನ್ನನ್ನು ಪ್ರೋತ್ಸಾಹಿಸಿತು. ಆರ್ಥಿಕ ಸಾಕ್ಷರತೆಯು ಪ್ರತಿಯೊಬ್ಬರೂ ಹೊಂದಿರಬೇಕಾದ ಅತ್ಯಗತ್ಯ ಜೀವನ ಕೌಶಲ್ಯವಾಗಿದೆ ಎಂದು ನನಗೆ ಈಗ ಮನವರಿಕೆಯಾಗಿದೆ. ಆದ್ದರಿಂದ ಕಾರ್ಯಾಗಾರದ ಮೂಲಕ ನಾನು ಗಳಿಸಿದ ಜ್ಞಾನವನ್ನು ಸಾಧ್ಯವಾದಷ್ಟು ಜನರಿಗೆ ಹರಡಲು ಪ್ರಯತ್ನಿಸುತ್ತಿದ್ದೇನೆ.

ನಮ್ಮ ಸ್ಥಳದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ನಾನು ಎನ್.ಸಿ.ಎಫ್.ಇ ಗೆ ಕೃತಜ್ಞತೆ ಹೇಳುತ್ತೇನೆ, ಇದು ನನ್ನ ಜೀವನವನ್ನು ಆಶಾವಾದಿಯಾಗಿ ನೋಡಲು ಸಹಾಯ ಮಾಡಿತು.

ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ

ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ಸ್ವೀಕರಿಸಲು ಇಂದೇ ಸೈನ್ ಅಪ್ ಮಾಡಿ

 ಜನಪ್ರಿಯ ಹುಡುಕಾಟಗಳು: NCFE, TENDERS, FEPA
Skip to content