Click here to visit our old website

Color Mode Toggle

ಪ್ರಾಯೋಜಕರು
Image 1 Image 2 Image 3 Image 4
ಜನಪ್ರಿಯ ಹುಡುಕಾಟಗಳು: ಎನ್.ಎಸ್.ಎಫ್.ಇ, ಟೆಂಡರ್ ಗಳು , ಫೆಪಿಎ

ಪ್ರಾಯೋಜಕರು

ನಿಖಿಲ್ ಸುಶೀಲ್

[breadcrumbs]

- ನಿಖಿಲ್ ಸುಶೀಲ್

ಕೇರಳ

ಆರ್ಥಿಕ ಸಾಕ್ಷರತೆಯ ಬುದ್ಧಿವಂತಿಕೆ

ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಲಪ್ಪುರಂ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾನು ನಿಖಿಲ್ ಸುಶೀಲ್, ಕೇರಳದ ಮಾಯಣ್ಣೂರಿನ ಲಕ್ಷ್ಮಿ ನಾರಾಯಣ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ. ನಾನು ಎನ್.ಸಿ.ಎಫ್.ಇ ಯ ಹಣಕಾಸು ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಅದು ಉಳಿತಾಯ ಖಾತೆಯನ್ನು ತೆರೆಯುವ ಅಗತ್ಯವನ್ನು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸುವ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.

ನಾನು ವೈಯಕ್ತಿಕವಾಗಿ ಉಳಿತಾಯದ ಮಹತ್ವವನ್ನು ಎಂದಿಗೂ ಗಣನೆಗೆ ತೆಗೆದುಕೊಂಡಿರಲಿಲ್ಲ, ನಾನು ಯಾವಾಗಲೂ ನಾನು ಪಡೆಯುತ್ತಿದ್ದ ಗಳಿಕೆಯ ಹೆಚ್ಚಿನದನ್ನು ಖರ್ಚು ಮಾಡುತ್ತಿದ್ದೆ ಮತ್ತು ಉಳಿತಾಯದ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಆದರೆ ಎನ್.ಸಿ.ಎಫ್.ಇ ಯ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ, ಉಳಿತಾಯವು ಜೀವನದ ಒಂದು ಭಾಗವಾಗಿರಬೇಕು ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರಲು ಮತ್ತು ಜೀವನದಲ್ಲಿ ತುರ್ತು ಸಂದರ್ಭಗಳನ್ನು ಎದುರಿಸಲು ಇದು ತುಂಬಾ ಅವಶ್ಯಕ ಎಂದು ನನಗೆ ಅರ್ಥವಾಯಿತು.

ಸಂಪಾದಿಸುವ ಸಮಯದಲ್ಲಿ ಬಜೆಟಿಂಗ್ ಮಾಡುವುದು ಅತ್ಯಗತ್ಯ ಎಂದು ಅರ್ಥಮಾಡಿಕೊಳ್ಳಲು ಕಾರ್ಯಾಗಾರವು ನನಗೆ ಸಹಾಯ ಮಾಡಿತು. ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಕೆಲಸಗಳನ್ನು ಮಾಡಲು ಬಜೆಟಿಂಗ್ ಸಹಾಯ ಮಾಡುತ್ತದೆ. ಜೀವನದ ಅಗತ್ಯಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸವನ್ನು ನಾನು ಕಲಿತುಕೊಂಡೆ. ಹೂಡಿಕೆಯು ದೀರ್ಘಾವಧಿಗೆ ಹಣವನ್ನು ಉಳಿಸಲು ಮತ್ತು ಗಳಿಸಲು ಉತ್ತಮ ಮಾರ್ಗವಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಗೆ ಮತ್ತು ಸಂಪಾದಿಸುವ ವ್ಯಕ್ತಿಗೆ ಅವನ / ಅವಳ ಆಸೆಗಳು / ಕನಸುಗಳನ್ನು ಪೂರೈಸಲು ಆರ್ಥಿಕ ಶಿಕ್ಷಣವು ತುಂಬಾ ಅವಶ್ಯಕ ಎಂದು ಕಾರ್ಯಾಗಾರವು ನನಗೆ ಅರ್ಥಮಾಡಿಸಿತು. ಉಳಿತಾಯ ಮತ್ತು ಹೂಡಿಕೆಗಳ ಅಭ್ಯಾಸವು ನಾನು ಈ ಹಿಂದೆ ಖರೀದಿಸಲು ಸಾಧ್ಯವಾಗದ ಅನೇಕ ವಸ್ತುಗಳನ್ನು ಖರೀದಿಸಲು ನನಗೆ ಸಹಾಯ ಮಾಡಿದೆ. ಎನ್.ಸಿ.ಎಫ್.ಇ ಯ ಸಹಾಯದಿಂದ ನಾನು ಜೀವನದ ಅಗತ್ಯಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸವನ್ನು ಕಲಿತುಕೊಂಡೆ. ಜೀವನ ನಡೆಸಲು ಇದು ನನಗೆ ಅತ್ಯುತ್ತಮ ಜೀವನ ಪಾಠವನ್ನು ಕಲಿಸಿಕೊಟ್ಟಿತು.

ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ

ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ಸ್ವೀಕರಿಸಲು ಇಂದೇ ಸೈನ್ ಅಪ್ ಮಾಡಿ

 ಜನಪ್ರಿಯ ಹುಡುಕಾಟಗಳು: NCFE, TENDERS, FEPA
Skip to content