Color Mode Toggle
Insurance awareness quiz (BimaGyaan)

ಪ್ರಾಯೋಜಕರು
Image 1 Image 2 Image 3 Image 4
ಜನಪ್ರಿಯ ಹುಡುಕಾಟಗಳು: ಎನ್.ಎಸ್.ಎಫ್.ಇ, ಟೆಂಡರ್ ಗಳು , ಫೆಪಿಎ

ಪ್ರಾಯೋಜಕರು

ವಯಸ್ಕರಿಗೆ ಹಣಕಾಸು ಶಿಕ್ಷಣ ಕಾರ್ಯಕ್ರಮ (ಫೆಪಿಎ)

ವಯಸ್ಕರಿಗೆ ಹಣಕಾಸು ಶಿಕ್ಷಣ ಕಾರ್ಯಕ್ರಮವನ್ನು (ಫೆಪಿಎ) ಎನ್ಸಿಎಫ್ಇ 2019 ರಲ್ಲಿ ಪ್ರಾರಂಭಿಸಿತು. ಫೆಪಿಎಎಂಬುದು ರೈತರು, ಮಹಿಳಾ ಗುಂಪುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳು, ಸಂಸ್ಥೆಯ ನೌಕರರು, ಕೌಶಲ್ಯ ಅಭಿವೃದ್ಧಿ ತರಬೇತಿದಾರರು ಮುಂತಾದ ವಯಸ್ಕರಲ್ಲಿ ಆರ್ಥಿಕ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಮತ್ತು ಕಾರ್ಯಗತಗೊಳಿಸಲಾದ ಹಣಕಾಸು ಸಾಕ್ಷರತಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಹಣಕಾಸು ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರದ ಗುರಿಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ ಮತ್ತು ವಿಶೇಷ ಕೇಂದ್ರೀಕೃತ ಜಿಲ್ಲೆಗಳಿಗೆ (ಎಸ್ಎಫ್ಡಿ ‘ಗಳು) ಗಮನ ಹರಿಸಲಾಗಿದೆ. ಎನ್ಸಿಎಫ್ಇ ಪ್ರತಿವರ್ಷ 5,000 ಕ್ಕೂ ಹೆಚ್ಚು ಫೆಪಿಎಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮವು “ಆರ್ಥಿಕವಾಗಿ ಜಾಗೃತ ಮತ್ತು ಸಶಕ್ತ ಭಾರತ”ದ ನಮ್ಮ ದೃಷ್ಟಿಕೋನಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
fe_programs@ncfe.org.in  +91- 022-68265115

ಫೆಪಿಎ ಯ ಪ್ರಮುಖ ಲಕ್ಷಣಗಳು

ಉದ್ದೇಶ
ಹಣಕಾಸು ಸೇವೆಗಳು ಮತ್ತು ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಮಾಜದ ಆರ್ಥಿಕವಾಗಿ ಹೊರಗುಳಿದ ವರ್ಗಗಳಲ್ಲಿ ವಿಶ್ವಾಸವನ್ನು ಉಂಟುಮಾಡುವ ಆರ್ಥಿಕ ಜಾಗೃತಿಯನ್ನು ಮೂಡಿಸುವುದು, ಆ ಮೂಲಕ ಹೆಚ್ಚಿನ ಜನರನ್ನು ಔಪಚಾರಿಕ ಹಣಕಾಸು ಕ್ಷೇತ್ರಕ್ಕೆ ತರುವುದು.

ಉದ್ದೇಶಿತ ಗುಂಪು
ವಿವಿಧ ಸಂಸ್ಥೆಗಳ ನೌಕರರು, ಎಸ್ಎಚ್ಜಿ  ಸದಸ್ಯರು, ರೈತರು ಮತ್ತು ಗ್ರಾಮೀಣ ಜನರು, ಮಹಿಳಾ ಗುಂಪುಗಳು, ಮನೆಕೆಲಸದವರು, ಎಂಜಿಎನ್ಆರ್ಇಜಿಎ ಕಾರ್ಡ್‌ದಾರರು, ಸೇನಾಪಡೆಗಳ ಸಿಬ್ಬಂದಿ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹೊರಗುಳಿದ ವಿಭಾಗ ಸೇರಿದಂತೆ ಇತರ ಯಾವುದೇ ವರ್ಗಗಳಂತಹ ವಯಸ್ಕರು.

ಉಚಿತವಾಗಿ
ಕಾರ್ಯಾಗಾರವನ್ನು ಉಚಿತವಾಗಿ ನಡೆಸಲಾಗುವುದು ಮತ್ತು ಭಾಗವಹಿಸುವವರಿಂದ ಯಾವುದೇ ಹಣವನ್ನು ಸಂಗ್ರಹಿಸಲಾಗುವುದಿಲ್ಲ. ಎನ್.ಸಿ.ಎಫ್.ಇ ಉಚಿತವಾಗಿ ಸಾಮಗ್ರಿಗಳನ್ನು ಒದಗಿಸುತ್ತದೆ.

ತರಬೇತಿದಾರರು
ಭಾರತದಾದ್ಯಂತ ಫೆಪಿಎ ಕಾರ್ಯಾಗಾರಗಳನ್ನು ನಡೆಸಲು ಎನ್.ಸಿ.ಎಫ್.ಇ ಹಣಕಾಸು ಶಿಕ್ಷಣ ತರಬೇತುದಾರರ ಜಾಲವನ್ನು ಹೊಂದಿದೆ.

ಕಂಟೆಂಟ್
ಫೆಪಿಎ ಗಾಗಿ ಹಣಕಾಸು ಶಿಕ್ಷಣ ಸಾಮಗ್ರಿಯನ್ನು ಎನ್.ಸಿ.ಎಫ್.ಇ ಅಭಿವೃದ್ಧಿಪಡಿಸಿದ್ದು, ಇದು ವಿಶೇಷವಾಗಿ ಸಮಾಜದ ವಯಸ್ಕ ಜನಸಂಖ್ಯೆಯನ್ನು ಗುರಿಯಾಗಿಸುತ್ತದೆ. ವಿಷಯಗಳು ಈ ಕೆಳಗಿನಂತಿವೆ: ಆದಾಯ, ವೆಚ್ಚಗಳು ಮತ್ತು ಬಜೆಟ್‌ ತಯಾರಿಸುವಿಕೆ, ಉಳಿತಾಯ, ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಸಾಲ ನಿರ್ವಹಣೆ, ಡಿಜಿಟಲ್ ವಹಿವಾಟುಗಳು, ವಿಮೆ, ಹೂಡಿಕೆ, ನಿವೃತ್ತಿ ಮತ್ತು ಪಿಂಚಣಿಗಳು, ಸರ್ಕಾರದ ಹಣಕಾಸು ಸೇರ್ಪಡೆ ಯೋಜನೆಗಳು, ವಂಚನೆಯಿಂದ ರಕ್ಷಣೆ – ಪೊಂಜಿ ಯೋಜನೆಗಳು ಮತ್ತು ನೋಂದಾಯಿಸದ ಹೂಡಿಕೆ ಸಲಹೆಗಾರರ ವಿರುದ್ಧ ಎಚ್ಚರಿಕೆ ಮತ್ತು ಕುಂದುಕೊರತೆ ಪರಿಹಾರ.

ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ

ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ಸ್ವೀಕರಿಸಲು ಇಂದೇ ಸೈನ್ ಅಪ್ ಮಾಡಿ

 ಜನಪ್ರಿಯ ಹುಡುಕಾಟಗಳು: NCFE, TENDERS, FEPA
Skip to content