Color Mode Toggle

ಪ್ರಾಯೋಜಕರು
Image 1 Image 2 Image 3 Image 4
ಜನಪ್ರಿಯ ಹುಡುಕಾಟಗಳು: ಎನ್.ಎಸ್.ಎಫ್.ಇ, ಟೆಂಡರ್ ಗಳು , ಫೆಪಿಎ

ಪ್ರಾಯೋಜಕರು

ಎನ್ಸಿಎಫ್ಇ ಬಗ್ಗೆ

ಹಣಕಾಸು ಶಿಕ್ಷಣಕ್ಕಾಗಿ ರಾಷ್ಟ್ರೀಯ ಕೇಂದ್ರ (ಎನ್ಸಿಎಫ್ಇ ) ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ ), ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಉತ್ತೇಜಿಸುವ ಸೆಕ್ಷನ್ 8 (ಲಾಭಕ್ಕಾಗಿ ಅಲ್ಲ) ಕಂಪನಿಯಾಗಿದೆ.

ದೃಷ್ಟಿಕೋನ

ಆರ್ಥಿಕವಾಗಿ ಜಾಗೃತ ಮತ್ತು ಸಶಕ್ತ ಭಾರತ.

ಧ್ಯೇಯ

 ಗ್ರಾಹಕರ ರಕ್ಷಣೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯತಂತ್ರದೊಂದಿಗೆ ನಿಯಂತ್ರಿತ ಸಂಸ್ಥೆಗಳ ಮೂಲಕ ಸೂಕ್ತ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರವೇಶಿಸುವ ಮೂಲಕ ಆರ್ಥಿಕ ಯೋಗಕ್ಷೇಮವನ್ನು ಸಾಧಿಸುವುದಕ್ಕಾಗಿ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಜನರಿಗೆ ಸಹಾಯ ಮಾಡುವ ಬೃಹತ್ ಹಣಕಾಸು ಶಿಕ್ಷಣ ಅಭಿಯಾನವನ್ನು ಕೈಗೊಳ್ಳುವುದು.

ಕಂಪನಿಯ ಉದ್ದೇಶ
  1. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಹಣಕಾಸು ಶಿಕ್ಷಣದ ರಾಷ್ಟ್ರೀಯ ಕಾರ್ಯತಂತ್ರಕ್ಕೆ ಅನುಗುಣವಾಗಿ ಎಲ್ಲ ಜನಸಮುದಾಯದ ವರ್ಗಗಳಿಗೆ ಭಾರತದಾದ್ಯಂತ ಹಣಕಾಸು ಶಿಕ್ಷಣವನ್ನು ಉತ್ತೇಜಿಸುವುದು.
  2. ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸಮಾವೇಶಗಳು, ತರಬೇತಿ, ಕಾರ್ಯಕ್ರಮಗಳು, ಅಭಿಯಾನಗಳು, ಚರ್ಚಾ ವೇದಿಕೆಗಳು ಸ್ವತಂತ್ರವಾಗಿ ಶುಲ್ಕ ಸಹಿತ/ ರಹಿತ ಅಥವಾ ಸಂಸ್ಥೆಗಳ ಸಹಾಯದಿಂದ ದೇಶಾದ್ಯಂತ ಹಣಕಾಸು ಶಿಕ್ಷಣ ಅಭಿಯಾನಗಳ ಮೂಲಕ ಆರ್ಥಿಕ ಜಾಗೃತಿ ಮತ್ತು ಸಬಲೀಕರಣವನ್ನು ಉಂಟು ಮಾಡುವುದು ಮತ್ತು ಹಣಕಾಸು ಶಿಕ್ಷಣದಲ್ಲಿ ತರಬೇತಿ ನೀಡುವುದು ಮತ್ತು ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಾನಿಕ್ ಅಲ್ಲದ ಸ್ವರೂಪಗಳು, ಕಾರ್ಯಪುಸ್ತಕಗಳಲ್ಲಿ ಹಣಕಾಸು ಶಿಕ್ಷಣ ಸಾಮಗ್ರಿಗಳನ್ನು ರಚಿಸುವುದು, ವರ್ಕ್‌ಶೀಟ್‌ಗಳು, ಸಾಹಿತ್ಯ, ಕರಪತ್ರಗಳು, ಕಿರುಪುಸ್ತಕಗಳು, ಫ್ಲೈಯರ್‌ಗಳು, ತಾಂತ್ರಿಕ ಸಾಧನಗಳು ಮತ್ತು ಹಣಕಾಸು ಸಾಕ್ಷರತೆಯನ್ನು ಸುಧಾರಿಸಲು ಹಣಕಾಸು ಮಾರುಕಟ್ಟೆಗಳು ಮತ್ತು ಹಣಕಾಸು ಡಿಜಿಟಲ್ ವಿಧಾನಗಳ ಬಗ್ಗೆ ಗುರಿ ಆಧಾರಿತ ಸೂಕ್ತ ಹಣಕಾಸು ಸಾಹಿತ್ಯವನ್ನು ಸಿದ್ಧಪಡಿಸುವುದು. ಇದರಿಂದ ಅವರ ಜ್ಞಾನ, ತಿಳುವಳಿಕೆ, ಕೌಶಲ್ಯಗಳು ಮತ್ತು ಹಣಕಾಸು ಸಾಮರ್ಥ್ಯವನ್ನು ಸುಧಾರಿಸುವುದು.

ನಮ್ಮ ಪ್ರಯಾಣ

  1. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಉಪ ಸಮಿತಿಯ ಹಣಕಾಸು ಸೇರ್ಪಡೆ ಮತ್ತು ಹಣಕಾಸು ಸಾಕ್ಷರತೆಯ ತಾಂತ್ರಿಕ ಗುಂಪಿನ ಮಾರ್ಗದರ್ಶನದಲ್ಲಿ ಹಣಕಾಸು ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು (ಎನ್ಎಸ್ಎಫ್ಇ) ಕಾರ್ಯಗತಗೊಳಿಸಲು ಎಲ್ಲ ಹಣಕಾಸು ವಲಯದ ನಿಯಂತ್ರಕರಾದ ಆರ್‌ಬಿಐ, ಸೆಬಿ, ಐಆರ್‌ಡಿಎಐ ಮತ್ತು ಪಿಎಫ್‌ಆರ್‌ಡಿಎ ಬೆಂಬಲದೊಂದಿಗೆ ಎನ್ಐಎಸ್ಎಂ ಅಡಿಯಲ್ಲಿ ಎನ್.ಸಿ.ಎಫ್.ಇ ಅನ್ನು ಸ್ಥಾಪಿಸಲಾಗಿದೆ.
    ಮೊದಲ ಹಣಕಾಸು ಸಾಕ್ಷರತೆ ಮತ್ತು ಸೇರ್ಪಡೆ ಸಮೀಕ್ಷೆ (ಎನ್ಎಫ್ಎಲ್ಐಎಸ್ - 2013) ಬಿಡುಗಡೆ.
    ಹಣಕಾಸು ಶಿಕ್ಷಣಕ್ಕಾಗಿ ಮೊದಲ ರಾಷ್ಟ್ರೀಯ ಕಾರ್ಯತಂತ್ರದ ಬಿಡುಗಡೆ (ಎನ್.ಎಸ್.ಎಫ್.ಇ 2013-2018).
  2. "ರಾಷ್ಟ್ರೀಯ ಹಣಕಾಸು ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆ (ಎನ್ಎಫ್ಎಲ್ಎಟಿ)" ಪ್ರಾರಂಭ
    ಜಾಗತಿಕವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅತಿದೊಡ್ಡ ಉಚಿತ ವಾರ್ಷಿಕ ಹಣಕಾಸು ಸಾಕ್ಷರತಾ ಪರೀಕ್ಷೆಗಳಲ್ಲಿ ಒಂದಾಗಿದೆ
  3. ಭಾರತದಾದ್ಯಂತ 6 ರಿಂದ 10 ನೇ ತರಗತಿಯ ಶಿಕ್ಷಕರಿಗೆ ಸಮಗ್ರ ತರಬೇತಿ ಕಾರ್ಯಕ್ರಮವಾದ "ಹಣಕಾಸು ಶೈಕ್ಷಣಿಕ ತರಬೇತಿ ಕಾರ್ಯಕ್ರಮ (ಎಫ್‌ಇಟಿಪಿ)" ಪ್ರಾರಂಭ.
    ಇಂಗ್ಲಿಷ್, ಹಿಂದಿ ಮತ್ತು ಇತರ 11 ಪ್ರಾದೇಶಿಕ ಭಾಷೆಗಳಲ್ಲಿ "ಎನ್.ಸಿ.ಎಫ್.ಇ ಯ ಅಧಿಕೃತ ವೆಬ್‌ಸೈಟ್" ಪ್ರಾರಂಭ.

  4. ಎನ್.ಸಿ.ಎಫ್.ಇ ಮತ್ತು ಸಿಬಿಎಸ್ಇ ಜಂಟಿಯಾಗಿ ಅಭಿವೃದ್ಧಿಪಡಿಸಿದ 6 ರಿಂದ 10 ನೇ ತರಗತಿಗಳಿಗೆ ಎಫ್ಇ ಕಾರ್ಯಪುಸ್ತಕಗಳ ಬಿಡುಗಡೆ.
  5. "ಹಣಕಾಸು ಜಾಗೃತಿ ಮತ್ತು ಗ್ರಾಹಕ ತರಬೇತಿ (ಎಫ್ಎಸಿಟಿ)" ಕಾರ್ಯಕ್ರಮದ ಪ್ರಾರಂಭ - ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಕಾರ್ಯಕ್ರಮ.
  6. ಆರ್‌ಬಿಐ, ಸೆಬಿ, ಐಆರ್‌ಡಿಎಐ ಮತ್ತು ಪಿಎಫ್‌ಆರ್‌ಡಿಎ ಪ್ರಾಯೋಜಿಸಿದ ಸೆಕ್ಷನ್ 8 (ಲಾಭಕ್ಕಾಗಿ ಅಲ್ಲದ) ಕಂಪನಿಯಾಗಿ ಎನ್.ಸಿ.ಎಫ್.ಇ ಸಂಯೋಜಿಸಲ್ಪಟ್ಟಿದೆ.
    102 ಸಂವಾದಾತ್ಮಕ ಕಿಯೋಸ್ಕ್ ಮತ್ತು ಮಾಹಿತಿಯುಕ್ತ ಡಿಜಿಟಲ್ ಸೈನೇಜ್ ಸಾಫ್ಟ್‌ವೇರ್ (ಡಿಎಸ್ಎಸ್) ಸ್ಥಾಪನೆ.
  7. ಭಾರತದ ವಯಸ್ಕ ಜನಸಮುದಾಯಕ್ಕೆ ಆರ್ಥಿಕ ಜಾಗೃತಿ ಮೂಡಿಸಲು "ವಯಸ್ಕರಿಗೆ ಹಣಕಾಸು ಶೈಕ್ಷಣಿಕ ಕಾರ್ಯಕ್ರಮ (ಫೆಪಿಎ)" ಎಂಬ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸುವುದು.
    ಎರಡನೇ ಹಣಕಾಸು ಸಾಕ್ಷರತೆ ಮತ್ತು ಸೇರ್ಪಡೆ ಸಮೀಕ್ಷೆ (ಎನ್ಎಫ್ಎಲ್ಐಎಸ್ - 2019) ಬಿಡುಗಡೆ.
  8. ಬ್ಯಾಂಕಿಂಗ್, ಷೇರು ಮಾರುಕಟ್ಟೆಗಳು, ವಿಮೆ ಮತ್ತು ಪಿಂಚಣಿ ಉತ್ಪನ್ನಗಳ ವಿಷಯಗಳನ್ನು ಒಳಗೊಂಡ ಮೂಲ ಹಣಕಾಸು ಶಿಕ್ಷಣದ ಇ-ಲರ್ನಿಂಗ್ ಕೋರ್ಸ್ ಎನ್.ಸಿ.ಎಫ್.ಇ ಯ "ಇ-ಎಲ್ಎಂಎಸ್" ಪ್ರಾರಂಭ
    ಹಣಕಾಸು ಶಿಕ್ಷಣಕ್ಕಾಗಿ ಎರಡನೇ ರಾಷ್ಟ್ರೀಯ ಕಾರ್ಯತಂತ್ರದ ಬಿಡುಗಡೆ (ಎನ್.ಎಸ್.ಎಫ್.ಇ 2020-2025).
    ಎನ್.ಸಿ.ಎಫ್.ಇ ತ್ರೈಮಾಸಿಕ ಸುದ್ದಿಪತ್ರದ ಬಿಡುಗಡೆ.
  9. ಎನ್.ಸಿ.ಎಫ್.ಇ ಅಧಿಕೃತ ವೆಬ್‌ಸೈಟ್‌ನಲ್ಲಿ "ಚಾಟ್‌ಬಾಟ್" ಬಿಡುಗಡೆ.
    ಇಂಗ್ಲಿಷ್, ಹಿಂದಿ ಮತ್ತು ಇತರ 11 ಪ್ರಾದೇಶಿಕ ಭಾಷೆಗಳಲ್ಲಿ ಹಣಕಾಸು ಶಿಕ್ಷಣ ಕೈಪಿಡಿ ಬಿಡುಗಡೆ.
    ಬ್ರೈಲ್ ಓದುಗರಿಗೆ ಹಣಕಾಸು ಶಿಕ್ಷಣ ಕೈಪಿಡಿ ಬಿಡುಗಡೆ
    ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಹಣಕಾಸು ಶಿಕ್ಷಣ ಕೈಪಿಡಿ ಬಿಡುಗಡೆ.
  10. ಸ್ವಸಹಾಯ ಗುಂಪುಗಳಿಗೆ ಹಣಕಾಸು ಶಿಕ್ಷಣ ಕೈಪಿಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ 15 'ಗ್ರಾಫಿಕ್ ಕಾದಂಬರಿಗಳ' ಬಿಡುಗಡೆ.
    ಪ್ರೊಕ್ಟರಿಂಗ್ ಮತ್ತು ನೇರ ನೋಂದಣಿ ವೈಶಿಷ್ಟ್ಯಗಳೊಂದಿಗೆ ಎನ್ಎಫ್ಎಲ್ಎಟಿ ಪೋರ್ಟಲ್ ಬಿಡುಗಡೆ.
    'ಎನ್.ಸಿ.ಎಫ್.ಇ ತರಬೇತುದಾರರ ಪೋರ್ಟಲ್' ಉದ್ಘಾಟನೆ
    ಎನ್.ಸಿ.ಎಫ್.ಇ ವೆಬ್‌ಸೈಟ್‌ನಲ್ಲಿ ಹಣಕಾಸು ಸಾಕ್ಷರತಾ ಡ್ಯಾಶ್‌ಬೋರ್ಡ್‌ ಸೇರ್ಪಡೆ.

ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ

ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ಸ್ವೀಕರಿಸಲು ಇಂದೇ ಸೈನ್ ಅಪ್ ಮಾಡಿ

 ಜನಪ್ರಿಯ ಹುಡುಕಾಟಗಳು: NCFE, TENDERS, FEPA
Skip to content