ಹಣಕಾಸು ಶಿಕ್ಷಣ ತರಬೇತಿ ಕಾರ್ಯಕ್ರಮ (ಫ್ಈಟಿಪಿ)
ಹಣಕಾಸು ಶಿಕ್ಷಣ ತರಬೇತಿ ಕಾರ್ಯಕ್ರಮ (ಫ್ಈಟಿಪಿ) ಮೂಲಕ, ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನಿಷ್ಪಕ್ಷಪಾತ ವೈಯಕ್ತಿಕ ಹಣಕಾಸು ಶಿಕ್ಷಣವನ್ನು ಒದಗಿಸಿ, ಆ ಮೂಲಕ ದೇಶಾದ್ಯಂತ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ಗುರಿಯನ್ನು ಎನ್ಸಿಎಫ್ಇ ಹಾಕಿಕೊಂಡಿದೆ. ಭಾರತದಾದ್ಯಂತ 6 ರಿಂದ 10 ನೇ ತರಗತಿಗಳನ್ನು ನಿರ್ವಹಿಸುವ ಶಾಲಾ ಶಿಕ್ಷಕರಿಗಾಗಿ ಎಫ್‌ಇಟಿಪಿ ಅನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವನ್ನು ಎರಡು ಆಧಾರ ಸ್ತಂಭಗಳಾದ ಶಿಕ್ಷಣ ಮತ್ತು ಜಾಗೃತಿಯ ಮೇಲೆ ನಿರ್ಮಿಸಲಾಗಿದೆ. ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸುಸ್ಥಿರ ಆರ್ಥಿಕ ಸಾಕ್ಷರತಾ ಅಭಿಯಾನವನ್ನು ರೂಪಿಸುವ ಉದ್ದೇಶವನ್ನು ಇದು ಹೊಂದಿದೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಮಗ್ರ ತರಬೇತಿಯನ್ನು ಪಡೆಯುತ್ತಾರೆ ಮತ್ತು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ‘ಮನಿ ಸ್ಮಾರ್ಟ್ ಟೀಚರ್ಸ್’ ಎಂದು ಪ್ರಮಾಣೀಕರಿಸಲಾಗುತ್ತದೆ. ಈ ಪ್ರಮಾಣೀಕೃತ ಬೋಧಕರನ್ನು ನಂತರ ಶಾಲೆಗಳಲ್ಲಿ ಹಣಕಾಸು ಶಿಕ್ಷಣ ತರಗತಿಗಳನ್ನು ಮುನ್ನಡೆಸಲು ಸಜ್ಜುಗೊಳಿಸಲಾಗುತ್ತದೆ. ಅಗತ್ಯ ಆರ್ಥಿಕ ಕೌಶಲ್ಯಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ವಿಸ್ತರಿಸುತ್ತದೆ, ಸಮುದಾಯಗಳಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಸಬಲೀಕರಣವನ್ನು ಬೆಳೆಸುವ ವಿಶಾಲ ಗುರಿಗೆ ಕೊಡುಗೆ ನೀಡುವುದಕ್ಕೂ ಅವರ ಪಾತ್ರದ ವ್ಯಾಪ್ತಿ ಇರುತ್ತದೆ. ಶಿಕ್ಷಕರ ತರಬೇತಿಯ ಮೂಲಕ ಆರ್ಥಿಕವಾಗಿ ವಿದ್ಯಾವಂತ ಸಮಾಜವನ್ನು ನಿರ್ಮಿಸುವ ಬದ್ಧತೆಯನ್ನು ಎನ್ಸಿಎಫ್ಇ ಯ ಎಫ್‌ಇಟಿಪಿ ಪ್ರತಿಬಿಂಬಿಸುತ್ತದೆ. ಅವರು ತಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಆರ್ಥಿಕ ಜಾಗೃತಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.
fe_programs@ncfe.org.in
+91- 022-68265115